(ನ್ಯೂಸ್ ಕಡಬ)newskadaba.com ನ್ಯೂಯಾರ್ಕ್, ಮಾ.09. ನ್ಯೂಯಾರ್ಕ್ ನ ದಕ್ಷಿಣ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿ ಭಾರತೀಯ-ಅಮೆರಿಕನ್ ವಕೀಲ ಅರುಣ್ ಸುಬ್ರಮಣಿಯನ್ ಅವರನ್ನು ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ನ್ಯೂಯಾರ್ಕ್ ನ ಸದರ್ನ್ ಡಿಸ್ಟ್ರಿಕ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಿರುವುದನ್ನ ಯುಎಸ್ ಸೆನೆಟ್ ಮಂಗಳವಾರ ಸಂಜೆ 58-37 ಮತಗಳಿಂದ ದೃಢಪಡಿಸಿದೆ ಎನ್ನಲಾಗಿದೆ.