ಬೈಕ್ ನಲ್ಲಿ ಹೋಗುವಾಗ ಹೆಜ್ಜೇನು ದಾಳಿ     ➤  ವ್ಯಕ್ತಿಯೊಬ್ಬರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com  ಶಿವಮೊಗ್ಗ, ಮಾ.08. ಬೈಕ್ ನಲ್ಲಿ ಹೋಗುವಾಗ ಹೆಜ್ಜೇನು ದಾಳಿ ನಡೆಸಿದ್ದು, ಮತ್ತೊಬ್ಬರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ಹುಲಿಕಲ್ ನ ಮೂರ್ತಿ ಪೂಜಾರ್ ಎಂಬವರು ಮಾರುತಿಪುರ ಸಮೀಪದ ಹೊಸ ಕೆಸರೆಯಲ್ಲಿರುವ ಪತ್ನಿ ಮನೆಗೆ ಬೈಕಿನಲ್ಲಿ ಹೋಗುವಾಗ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ.

ಕೂಡಲೇ ಅಲ್ಲಿಯೇ ಇದ್ದ ಮಹಮದ್ ಗೌಸ್ ಎಂಬವರು ತಮ್ಮ ಜೀವದ ಹಂಗು ತೊರೆದು ಮೂರ್ತಿ ಪೂಜಾರ್ ಅವರಿಗೆ ಕಂಬಳಿ ಹೊದಿಸಿ ಮಾರುತಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.

Also Read  ಅರಣ್ಯ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ- ಸಚಿವ ಮಧು ಬಂಗಾರಪ್ಪ

 

 

error: Content is protected !!
Scroll to Top