ಆಟೋ ಹತ್ತಿದ್ದ ಅಸ್ಸಾಂ ಯುವಕರ ಬೆದರಿಸಿ ಹಣ ಸುಲಿಗೆ       ➤  ಆರೋಪಿಗಳು ಸೆರೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.07. ಹೊರ ರಾಜ್ಯದ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಆಟೋದಿಂದ ಕೆಳಗೆ ಇಳಿಸಿ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆಟೋ ಚಾಲಕರನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬಾಣಸವಾಡಿ ನಿವಾಸಿ ಆರ್‌.ರೋಬಿನ್‌ (48) ಮತ್ತು ಸೇವಾನಗರದ ಯುವರಾಜ್‌ (39) ಬಂಧಿತ ಆಟೋ ಚಾಲಕರು ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಟೋ, ಮೊಬೈಲ್‌, .1 ಸಾವಿರ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಕಲ್ಲುಗುಡ್ಡೆ-ಕಡಬ ಮಧ್ಯೆ ದಿನದ ಮೂರು ಹೊತ್ತು ಬಸ್ಸಿಗಾಗಿ ಸಾರ್ವಜನಿಕರ ಆಗ್ರಹ

 

error: Content is protected !!
Scroll to Top