ಕಷ್ಟಕಾಲಕ್ಕೆ ನೆರವಾದ ಭಾರತದ ವಿರುದ್ದ ನಿಂತ ಟರ್ಕಿ..!

(ನ್ಯೂಸ್ ಕಡಬ) newskadaba.com ಟರ್ಕಿ, ಮಾ. 06. ಇತ್ತೀಚೆಗೆ ಟರ್ಕಿಯಲ್ಲಿ ಉಂಟಾದ ಭೀಕರ ಭೂಕಂಪದಿಂದ ಕಂಗೆಟ್ಟು ಹೋಗಿರೋ ಟರ್ಕಿಗೆ ಭಾರತವು ಅಪಾರ ಸಹಾಯ ಹಸ್ತ ಚಾಚಿರುವುದು, ಆಪರೇಷನ್​ ದೋಸ್ತ್ ಹೆಸರಿನಲ್ಲಿ ಭಾರತದ ಸೇನೆ ಟರ್ಕಿಗೆ ತೆರಳಿ ಅಲ್ಲಿರುವ ಜನರ ಜೀವವನ್ನು ಕಾಪಾಡಿದೆ. ಮಾತ್ರವಲ್ಲದೇ ಎನ್‌ಡಿಆರ್‌ಎಫ್ ಯೋಧರು, ಅಗತ್ಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳ ಜೊತೆಗೆ ತರಬೇತಿ ಪಡೆದ ಶ್ವಾನ ತಂಡವನ್ನೂ ಕಳುಹಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿತ್ತು.

ಆದರೆ, ಇಷ್ಟೆಲ್ಲಾ ಮಾಡಿದ ಮೇಲೂ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ನಲ್ಲಿ, ಟರ್ಕಿಯು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರೋಧ ನಿಂತಿದೆ. ಭಾರತದಿಂದ ಭಾರೀ ನೆರವು ಪಡೆದ ಟರ್ಕಿ, ವಾರದ ನಂತರದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದೆ. ಜಿನೀವಾದಲ್ಲಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್​ನಲ್ಲಿ ಟರ್ಕಿಯು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಖಂಡಿಸಿದ್ದಾರೆ. ಒಐಸಿ ಈಗಾಗಲೇ ಈ ವಿಷಯದ ಕುರಿತು ಚರ್ಚಿಸಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಈ ಮೂಲಕ ಕೋಮುವಾದ, ಪಕ್ಷಪಾತದಂಥ ಕಾರ್ಯ ಎಸಗುತ್ತಿದೆ ಎಂದಿದ್ದಾರೆ.

Also Read  ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top