10th ಪಾಸ್ ಆಗಿದ್ರೆ ಈಗಲೇ ಅಪ್ಲೈ ಮಾಡಿ ➤ ಅಂಚೆ ಕಛೇರಿಯಲ್ಲಿ 58 ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಾ. 06. ಅಂಚೆ ಇಲಾಖೆಯು ಖಾಲಿಯಿರುವ ಸಾಮಾನ್ಯ ಕೇಂದ್ರ ಸೇವೆ, ಗ್ರೂಪ್-ಸಿ, ನಾನ್-ಗೆಜೆಟೆಡ್, ನಾನ್ ಮಿನಿಸ್ಟ್ರಿಯಲ್ ವರ್ಗದಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; ಮಾರ್ಚ್ 31, 2023

ಹುದ್ದೆಗಳ ಸಂಖ್ಯೆ ಮತ್ತು ಹೆಸರು:-

ಅಂಚೆಯಲ್ಲಿ ಖಾಲಿಯಿರುವ 58 ಕಾರು ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯೋಮಿತಿ 18 ವರ್ಷದಿಂದ 27 ವರ್ಷದೊಳಗಿರಬೇಕು.

OBC ಅಭ್ಯರ್ಥಿ ವಯಸ್ಸಿನ ಮಿತಿ – 18 ರಿಂದ 29 ವರ್ಷ

SC/ST ಅಭ್ಯರ್ಥಿಗಳ ವಯಸ್ಸಿನ ಮಿತಿ- 18 ರಿಂದ 32 ವರ್ಷ

Also Read  ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಗೊತ್ತೇ ?

ವಯೋಮಿತಿ ಸಡಿಲಿಕೆ: SC/ST/OBC ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ಸಡಿಲಿಕೆ

SC/ST- 05 ವರ್ಷ, OBC- 03 ವರ್ಷ

ವೇತನ:- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 19,900/- ರೂ. 63,200/- ವೇತನ ಸಿಗಲಿದೆ.

ಅರ್ಜಿಶುಲ್ಕ:- ಯುಆರ್/ಸಾಮಾನ್ಯ/ಒಬಿಸಿ ಅಭ್ಯರ್ಥಿ ಅರ್ಜಿ ಶುಲ್ಕ- ರೂ. 100/-

ST/ST/ಮಹಿಳಾ ಅಭ್ಯರ್ಥಿ ಅರ್ಜಿ ಶುಲ್ಕ- ಉಚಿತ

ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಬ್ಯಾಂಕ್ ಚಲನ್ ಮೂಲಕ ಪಾವತಿ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ

ಅರ್ಹತಾ ಮಾನದಂಡಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಪಾಸ್ ಅಥವಾ ತತ್ಸಮಾನವನ್ನು ಹೊಂದಿರಬೇಕು.

ಇತರ ಶಿಕ್ಷಣ ಅರ್ಹತೆಯ ವಿವರಗಳಗಳನ್ನು ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೋಡಬಹುದು.

Also Read  ಜೀವನದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ ಈ ವಿಧಾನವನ್ನು ಅನುಸರಿಸಿ

error: Content is protected !!