ಪಿಲಿಕುಳ: ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿಗಳು ► ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನಾಲ್ವರಿಗೆ ಥಳಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.02. ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ನಾಲ್ವರಿಗೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಪಿಲಿಕುಳದಲ್ಲಿ ಮಂಗಳವಾರದಂದು ನಡೆದಿದೆ.

ಐಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೆನ್ನಲಾದ ಇಬ್ಬರು ಯುವತಿಯರು ಹಾಗೂ ಇಬ್ಬರು ಭಿನ್ನ ಕೋಮಿನ ಯುವಕರು ಪಿಲಿಕುಳದ ಮಾನಸ ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ನಾಲ್ವರಿಗೂ ಹಲ್ಲೆಗೈಯುವ ಮೂಲಕ ನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ವಿಷಯ ತಿಳಿದ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಹಲ್ಲೆ ಮಾಡುತ್ತಿರುವವರನ್ನು ಚದುರಿಸಿ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!

Join the Group

Join WhatsApp Group