ಉಪ್ಪಿನಂಗಡಿ: ಅಕ್ರಮ ಮದ್ಯ ಮಾರಾಟ ➤ ಆರೋಪಿ ಅಂದರ್

crime, arrest, suspected

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 06. ಅಕ್ರಮ ಮದ್ಯ ಮಾರಾಟ ಪ್ರಕರಣವೊಂದನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ ಕುರಿತು ವರದಿಯಾಗಿದೆ.

ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಉಮೇಶ ಪೂಜಾರಿ (47) ಎಂದು ಗುರುತಿಸಲಾಗಿದೆ. ಈತ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಈತನಿಂದ ರೂ. 110 ನಗದು, 90 ಎಂ.ಎಲ್.ನ ಮದ್ಯ ತುಂಬಿದ 20 ಟೆಟ್ರಾ ಪ್ಯಾಕ್‌ಗಳನ್ನು ಹಾಗೂ 500 ಎಂ.ಎಲ್. ಬಿಯರ್‌ನ 12 ಟಿನ್‌ಗಳನ್ನು ವಶಕ್ಕೆ ಪಡೆದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Also Read  ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ತರಬೇತಿ ಶಿಬಿರ- ಆಸಕ್ತರಿಂದ ಅರ್ಜಿ ಆಹ್ವಾನ

error: Content is protected !!
Scroll to Top