ಸುರತ್ಕಲ್:  ಜಲೀಲ್ ಕೊಲೆ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.04. ಸುರತ್ಕಲ್ ಕಾಟಿಪಳ್ಳದ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ಆರೋಪಿಯೋರ್ವನಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಗುರುತಿಸಲಾಗಿದೆ.

ಜಲೀಲ್ ಕೊಲೆ ಪ್ರಕರಣದ ಮೂರನೇ ಆರೋಪಿ ಪವನ್ ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ
ನ್ಯಾಯಾದೀಶರಾದ ರವೀಂದ್ರ ಜೋಷಿ ಅವರು ಶರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.

ಸುರತ್ಕಲ್​​ನ ಕಾಟಿಪಳ್ಳ ನಾಲ್ಕನೇ ಬ್ಲಾಕ್​ನಲ್ಲಿ ಜಲೀಲ್(45) ಎಂಬುವರಿಗೆ ದುಷ್ಕರ್ಮಿಗಳು ಡಿ.24ರಂದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

Also Read  ಉಡುಪಿ ಕ್ಯಾಂಪಸ್‌ನಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನ ಪ್ರಕರೆಣ ➤ 42 ವಿದ್ಯಾರ್ಥಿಗಳ ಅಮಾನತು

 

 

error: Content is protected !!
Scroll to Top