ಆಸ್ಕರ್​ ವೇದಿಕೆಯಲ್ಲಿ ನಿರೂಪಕಿಯಾಗಿ ದೀಪಿಕಾ ಪಡುಕೋಣೆ !!

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.03. 2023ನೇ ಸಾಲಿನ ಆಸ್ಕರ್​ನಲ್ಲಿ ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಘೋಷಿಸಲ್ಪಟ್ಟಿದ್ದಾರೆ. ಗುರುವಾರ ರಾತ್ರಿ, ದೀಪಿಕಾಪಡುಕೋಣೆ ಇನ್​ಸ್ಟಾಗ್ರಾಂನಲ್ಲಿ ಎಲ್ಲಾ ನಿರೂಪಕರ ಹೆಸರಿನೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಫಾಸ್ಟ್​ ಆಯಂಡ್​ ಫ್ಯೂರಿಯಸ್​ ಖ್ಯಾತಿಯ ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಟ್ರಾಯ್ ಕೋಟ್ಸೂರ್, ಡ್ವೇನ್ ಜಾನ್ಸನ್, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಮೆಲಿಸ್ಸಾ ಮೆಕಾರ್ಥಿ, ಜೋ ಸಲ್ಡಾನಾ, ಡೊನ್ನಿ ಯೆನ್, ಜೊನಾಥನ್ ಮೇಜರ್ಸ್ ಮತ್ತು ಕ್ವೆಸ್ಟ್‌ಲೋವ್ ಕೂಡ ಇದ್ದಾರೆ.

Also Read  ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರ; ಗರ್ಭಪಾತ ಮಾಡಿಸಿದ್ದ ವ್ಯಕ್ತಿಗೆ 20ವರ್ಷ ಶಿಕ್ಷೆ, ದಂಡ

ದೀಪಿಕಾ ಪೋಸ್ಟ್​ ಮಾಡಿದ ಕೆಲವೇ ಸಮಯದಲ್ಲಿ, ನೆಟಿಜನ್‌ಗಳು ದೀಪಿಕಾ ಅವರ ಕಾಮೆಂಟ್ ವಿಭಾಗವನ್ನು ಅಭಿನಂದನೆಗಳನ್ನು ಹೇಳಿದ್ದಾರೆ.

 

error: Content is protected !!
Scroll to Top