ಹೊಸ ವರ್ಷದಂದೇ ನಡೆಯಿತು ಭೀಕರ ಅಪಘಾತ ► ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಐವರು ಮೃತ್ಯು

(ನ್ಯೂಸ್ ಕಡಬ)‌ newskadaba.com ಬೆಂಗಳೂರು, ಜ.01. ನಿಂತಿದ್ದ ಕ್ಯಾಂಟರ್ ಗೆ ಹಿಂದಿನಿಂದ ಕಾರೊಂದು ಢಿಕ್ಕಿಯಾದ ಪರಿಣಾಮವಾಗಿ ಒಂದೇ ಕುಟುಂಬದ ಐವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿಮಠ ಬಳಿ ಸೋಮವಾರದಂದು ಬೆಳಗ್ಗಿನ ಜಾವ ನಡೆದಿದೆ.

ಮೃತ ದುರ್ದೈವಿಗಳನ್ನು ಚೌಡನಕುಪ್ಪೆ ಮದ್ದೂರು ನಿವಾಸಿಗಳಾದ ಸಿದ್ದೋಜಿ ರಾವ್(65), ಉಷಾಬಾಯಿ(35), ಕೀರ್ತನಾ(7),ಹಿತೇಶ್(3), ಭುವನಾ(16) ಎಂದು ಗುರುತಿಸಲಾಗಿದೆ. ಇವರು ಹೊಸ ವರ್ಷದ ಅಂಗವಾಗಿ ಇಂದು ಮುಂಜಾನೆ ಕೊರಟಗೆರೆ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರಿಗೆ ಅಡ್ಡ ಬಂದ ಬಾಲಕಿಯನ್ನು ರಕ್ಷಿಸಲು ಹೋಗಿ ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಗೆ ಕಾರು ಢಿಕ್ಕಿ ಹೊಡೆದಿದೆ.

Also Read  ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ ದಾವೂದ್ ಇಬ್ರಾಹಿಂ ► ಕಾರಣ ಯಾರು ಗೊತ್ತೆ...???

error: Content is protected !!
Scroll to Top