ಶಾಲಾ-ಕಾಲೇಜು ದೋಚುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ     

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಶಾಲಾ-ಕಾಲೇಜುಗಳನ್ನು ಗುರಿಯಾಗಿಸಿ ಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳನ್ನು ತಮಿಳುನಾಡಿನ ಸೇಲಂ ಜಿಲ್ಲೆಯ ನಿವಾಸಿಗಳಾದ ಅಣ್ಣಾ ದೊರೈ (42), ವೀರಮಲೈ ಅಲಿಯಾಸ್ ಕುಮಾರ್ (40) ಮತ್ತು ಬಾಬು (34) ಎಂದು ಗುರುತಿಸಲಾಗಿದೆ ಎನ್ನಲಾಗಿದೆ.

ಫೆಬ್ರವರಿ 10 ರಂದು ನಾಗದೇವನಹಳ್ಳಿಯ ವಿಎಸ್‌ಎಸ್ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ದುಷ್ಕರ್ಮಿಗಳು ರೂ. 5 ಲಕ್ಷ ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿದ್ದರು ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಮಗಳೆಂದರೆ ಅಪ್ಪನಿಗೆ ಪಂಚಪ್ರಾಣ ► ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ..!!!

 

 

error: Content is protected !!
Scroll to Top