ವೈದ್ಯಕೀಯ ವಿಮಾನ ಪತನ ➤ ಪೈಲಟ್ ಸಹಿತ ಪ್ರಯಾಣಿಕರು ಮೃತ್ಯು

Crime

(ನ್ಯೂಸ್ ಕಡಬ) newskadaba.com ನೆವಾಡಾ, ಫೆ. 27. ವೈದ್ಯಕೀಯ ವಿಮಾನವೊಂದು ಪತನಗೊಂಡು ಐವರು ಮೃತಪಟ್ಟ ಘಟನೆ ಅಮೇರಿಕಾದ ಉತ್ತರ ನೆವಾಡಾದ ಸ್ಟೇಜ್‌ ಕೋಚ್ ಬಳಿ ವಿಮಾನ ನಡೆದಿದೆ.

ಮೃತರಲ್ಲಿ ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದ ನಡುವೆಯೂ ಪರ್ವತ ಪ್ರದೇಶದಲ್ಲಿ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಈ ಚಿಕ್ಕ ವಿಮಾನದಲ್ಲಿ ಸಾಗಿಸಲಾಗುತ್ತಿತ್ತು. ಪತನಕ್ಕೀಡಾದ ಈ ವಿಮಾನ ನೆಲಕ್ಕಪ್ಪಳಿಸಿದ್ದು, ಹೊತ್ತಿ ಉರಿದಿದೆ. ಇದರಿಂದಾಗಿ, ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಭಾರತ-ದುಬೈ ಉಭಯ ದೇಶಗಳ ನಡುವೆ ವಿಶೇಷ ವಿಮಾನ ➤ ಜುಲೈ 12ರಿಂದ 26ರ ವರೆಗೆ ಹಾರಾಟ

error: Content is protected !!
Scroll to Top