ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ      ➤  ಆರೋಪಿ ಅಂದರ್

(ನ್ಯೂಸ್ ಕಡಬ)newskadaba.com  ತುಮಕೂರು, ಫೆ.25. ತಿಪಟೂರು ಪಟ್ಟಣದಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆಯಾಗಿದ್ದು, ದಂಧೆಯಲ್ಲಿ ತೊಡಗಿದ್ದ ತಿಪಟೂರಿನ ವ್ಯಕ್ತಿ ವಿರುಪಾಕ್ಷಿ ಗೌಡ ಅಲಿಯಾಸ್ ಪಕ್ಷಿಗೌಡನನ್ನು ಮಾಲು ಸಮೇತ ಕೇರಳ ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೇ 15 ಲಕ್ಷದಷ್ಟು ಬೆಲೆಬಾಳುವ ತಿಮಿಂಗಿಲ ವಾಂತಿ ಮಾಲು ಮಾರಾಟ ಮಾಡಲು ಯತ್ನಿಸುತ್ತಿದ್ದ ವಿರುಪಾಕ್ಷಿಗೌಡ ಕೇರಳ ಪೊಲೀಸರಿಗೆ ಮಾಲು ಸಮೇತ ತಗ್ಲಾಕ್ಕೊಂಡಿದ್ದು, ಇದೀಗ ಅಂದರ್ ಆಗಿದ್ದಾನೆ. ಇನ್ನು ಮಾಲು ಕೊಂಡುಕೊಳ್ಳೋ ವೇಷದಲ್ಲಿ ಕೇರಳ ಪೊಲೀಸರು ಬಂದಿದ್ದು, ಸದ್ಯ ತಿಪಟೂರು ತಾಲೂಕಿನ ಕಡೆಹಳ್ಳಿ ಗ್ರಾಮದ ವಿರುಪಾಕ್ಷಿಗೌಡ ಸಚಿವ ಬಿ.ಸಿ ನಾಗೇಶ್ ಅವರ ಆಪ್ತ ಎನ್ನಲಾಗಿದೆ.

Also Read  ಕಡಬ ಸಮೀಪದ ಪಂಜ ಸೇರಿದಂತೆ ಸುಳ್ಯದ ಹಲವೆಡೆ ಮತ್ತೆ ಭೂಕಂಪನ ➤ ಭಯಭೀತರಾದ ಜನತೆ

 

error: Content is protected !!
Scroll to Top