➤ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಅಹ್ವಾನ!

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.24.  ರಾಜ್ಯ ಪೊಲೀಸ್ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಕರಾವಳಿ ಕಾವಲು ಪೊಲೀಸ್ ಪಡೆಯ ಉಡುಪಿ ಘಟಕದಲ್ಲಿನ 5 ವರ್ಷದ ಮಟ್ಟಿಗೆ ಚಾಲ್ತಿಯಲ್ಲಿರುವ ಗುತ್ತಿಗೆ ಆಧಾರಿತ ಕೆಲಸವಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ಅಧೀಕ್ಷಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ ಈ ನೇಮಕಾತಿ ನಡೆಯಲಿದೆ.

ಬೋಟ್ ಕ್ಯಾಪ್ಟನ್ 6 ಹುದ್ದೆಗಳು (ಪಿಎಸ್‌ಐ ಶ್ರೇಣಿ), ಸಹಾಯಕ ಬೋಟ್ ಕ್ಯಾಪ್ಟನ್ 7 ಹುದ್ದೆಗಳು (ಎಎಸ್‌ಐ ಶ್ರೇಣಿ), ಮೋಟಾರ್ ಲಾಂಚ್ ಮೆಕಾನಿಕ್ 2 ಹುದ್ದೆಗಳು (ಎಎಸ್‌ಐ ಶ್ರೇಣಿ) ಮತ್ತು ಇಂಜಿನ್ ಡ್ರೈವರ್ 10 ಹುದ್ದೆಗಳಿಗೆ (ಹೆಡ್‌ ಕಾನ್‌ಸ್ಟೇಬಲ್ ಶ್ರೇಣಿ) ಅರ್ಜಿ ಆಹ್ವಾನಿಸಲಾಗಿದೆ.

Also Read  ಕಾಸರಗೋಡು: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ➤ ಬಾಲಕನೋರ್ವ ಮೃತ್ಯು

ನೇವಿ, ಕೋಸ್ಟ್‌ಗಾರ್ಡ್ ಮತ್ತು ಬಿಎಸ್‌ಎಫ್ ವಾಟರ್ ವಿಂಗ್‌ನಿಂದ ನಿವೃತ್ತಗೊಂಡವರು ಈ ಹುದ್ದೆಗಳಿಗೆ ಮಾರ್ಚ್ 8ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಕರಾವಳಿ ಕಾವಲು ಪೊಲೀಸ್ ಪಡೆಯ ಉಡುಪಿ ಕಚೇರಿಯಲ್ಲಿ ಕೆಲಸದ ವೇಳೆ ಪಡೆಯಬಹುದು. ವಿದ್ಯಾರ್ಹತೆ, ವೇತನ ಶ್ರೇಣಿ ಇತರೆ ಮಾಹಿತಿಗಳಿಗೆ ಆಸಕ್ತರು ksp.gov.in ನೋಡಬಹುದು.

error: Content is protected !!
Scroll to Top