ಕಡಬ: ಮೂರನೇ ದಿನಕ್ಕೆ ಕಾಲಿಟ್ಟ ‘ಆಪರೇಷನ್ ಎಲಿಫೆಂಟ್’ ➤ ಪಥ ಬದಲಿಸಿ ಕೊಂಬಾರು ಬಾರ್ಯದಲ್ಲಿ ಕಂಡುಬಂದ ಕಾಡಾನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಳೆದೆರಡು ದಿನಗಳಿಂದ ಅರಣ್ಯ ಅಧಿಕಾರಿಗಳಿಗೆ ತಲೆನೋವನ್ನು ತರಿಸಿರುವ ಕಾಡಾನೆಯು ಇಂದು ತನ್ನ ಪಥವನ್ನು ಬದಲಿಸಿದ್ದು, ಕೊಂಬಾರು ಗ್ರಾಮದ ಬಾರ್ಯ ಎಂಬಲ್ಲಿ ಕಂಡುಬಂದಿದೆ.

ಬುಧವಾರದಂದು ಐತ್ತೂರು ಗ್ರಾಮದ ಸುಳ್ಯ ಸಮೀಪ ಕಂಡುಬಂದಿದ್ದ ಆನೆಯನ್ನು ಸೆರೆಹಿಡಿಯಲು ಹರಸಾಹಸ ನಡೆಸಿದ್ದ ಅಧಿಕಾರಿಗಳು, ಪೊದರುಗಳ ನಡುವೆ ಅವಿತಿದ್ದ ಆನೆಯ ಮೇಲೆ ಶೂಟ್ ಮಾಡಿದ್ದ ಅರಿವಳಿಕೆ ಚುಚ್ಚುಮದ್ದು ಗುರಿ ತಪ್ಪಿತ್ತು. ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದು ಕೊಂಬಾರು ಗ್ರಾಮದ ಬಾರ್ಯ ಸಮೀಪ ಕಾಡಿನಲ್ಲಿ ಆನೆ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Scroll to Top