ಬಂಟ್ವಾಳ: ದೇಶದಲ್ಲೇ ಮೊದಲ ಬಾರಿಗೆ ‘ಉಸ್ನೆಯ ಹಿರುಟ’ ಕಲ್ಲು ಹೂವು ಪತ್ತೆ !

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.23. ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿನಾಯಕ್ ಕೆ.ಎಸ್‌ ಅವರ ನೇತೃತ್ವದ ಸಂಶೋಧನಾ ತಂಡದಿಂದ ‘ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಮುಳ್ಳಯ್ಯನ ಗಿರಿಯಲ್ಲಿ ಗುರುತಿಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಗುರುತಿಸಲಾದ ಪ್ರಭೇದ ಎಂದು ಡಾ. ವಿನಾಯಕ್ ತಿಳಿಸಿದ್ದಾರೆ.

ಈ ಪ್ರಭೇದವು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದಾಗಿದ್ದು, 1500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಮಾತ್ರ ಉತ್ಪತ್ತಿ ಆಗಲು ಸಾಧ್ಯ. ಇದು ವಾತಾವರಣದ ಮಾಲಿನ್ಯಕ್ಕೆ ಬೇಗ ನಶಿಸಿಹೋಗುವ ಪ್ರಭೇದವಾಗಿದ್ದು ಅತ್ಯಂತ ಕಡಿಮೆ ಮಾಲಿನ್ಯ ಇರುವ ಪ್ರದೇಶದಲ್ಲಿ ಮಾತ್ರ ಅಪರೂಪವಾಗಿ ದೊರೆಯುತ್ತದೆ ಎನ್ನಲಾಗಿದೆ.

Also Read  ಮಾಣಿ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾವರಿಗೆ ರಾಜ್ಯ ಮಟ್ಟದ 'ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

 

error: Content is protected !!
Scroll to Top