ಚರ್ಮಗಂಟು ರೋಗದಿಂದ 74 ಜಾನುವಾರು ಮೃತ್ಯು

(ನ್ಯೂಸ್ ಕಡಬ)newskadaba.com  ಉಡುಪಿ, ಫೆ.22. ಹೈನುಗಾರಿಕೆ, ಕೃಷಿಕ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯಲ್ಲಿ ಈವರೆಗೂ 74 ಜಾನುವಾರುಗಳು ಸಾವನ್ನಪ್ಪಿವೆ. ಡಿಸೆಂಬರ್‌, ಜನವರಿ ತಿಂಗಳಲ್ಲಿ ರೋಗ ಪ್ರಮಾಣ ಹೆಚ್ಚಿದ್ದು, ಜಾನುವಾರುಗಳ ಜೀವ ಹಿಂಡಿತ್ತು, ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಜಾನುವಾರು ರೋಗಬಾಧೆಯಿಂದ ಬಳಲುತ್ತಿವೆ.

ಜಿಲ್ಲೆಯಲ್ಲಿ 2,57,184 ಲಕ್ಷ ಜಾನುವಾರುಗಳಿದ್ದು, ಸಂಪೂರ್ಣ ಲಸಿಕೆ ಹಾಕಿಸುವ ಪ್ರಕ್ರಿಯೆ ಜಿಲ್ಲೆ ಪಶುವೈದ್ಯರು, ಸಿಬಂದಿ ತಂಡ ಮುಗಿಸಿದೆ. ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ.

Also Read  ಮಂಗಳೂರು: ಜ. 21ರಂದು ತಾರಸಿ, ಕೈತೋಟ ತರಬೇತಿ

 

error: Content is protected !!
Scroll to Top