(ನ್ಯೂಸ್ ಕಡಬ) newskadaba.com ಮುಂಬೈ, ಫೆ.18 : ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂಬೈ ಪೊಲೀಸರು 24 ವರ್ಷದ ಯುವಕನನ್ನು ಪತ್ತೆಹಚ್ಚಿದ್ದಾರೆ ಮತ್ತು ಆತನನ್ನು ಕೌನ್ಸೆಲಿಂಗ್‌ಗಾಗಿ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಾಲದ ಸುಳಿಗೆ ಸಿಲುಕಿರುವ ವ್ಯಕ್ತಿ, ನಗರದ ಚೆಂಬೂರು ಸಮೀಪದ ಚುನಾಭಟ್ಟಿ ನಿವಾಸಿಯಾಗಿದ್ದು, ರಾಯಗಡ ಜಿಲ್ಲೆಯ ಕರ್ಜತ್‌ನಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.