ಮಂಗಳೂರು: ಶೂಟೌಟ್ ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರು ► ಪಿಸ್ತೂಲ್, ಮದ್ದುಗುಂಡುಗಳ‌ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.29. ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣವನ್ನು ಭೇದಿಸಿರುಬ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ.

ಬಂಧಿತ ಆರೋಪಿಗಳನ್ನು ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಮುಲ್ಕಿ ನಿವಾಸಿ ಮನೋಜ್ ಕುಂದರ್(35) ಹಾಗೂ ಕಾಪಿಕಾಡ್ ನಿವಾಸಿ ಚಂದ್ರಶೇಖರ(32) ಎಂದು ಗುರುತಿಸಲಾಗಿದೆ. ಡಿಸೆಂಬರ್ 07 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ಶೂಟೌಟ್, ಡಿಸೆಂಬರ್ 08 ರಂದು ಕಾರ್ ಸ್ಟ್ರೀಟ್ ಎಂಬಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ & ಸ್ಯಾರಿಸ್ ಎಂಬ ಬಟ್ಟೆ ಮಳಿಗೆಯ ಕೆಲಸದವರಾದ ಮಹಾಲಿಂಗ ನಾಯ್ಕ್ ಎಂಬವರ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ಹಾಗೂ ಡಿಸೆಂಬರ್ 23 ರಂದು ಮುಲ್ಕಿ ನಿವಾಸಿ ಉದ್ಯಮಿ ನಾಗರಾಜ್ ಎಂಬವರ ಮನೆಯ ಕಿಟಕಿಗೆ ಹಾಗೂ ಅವರ ಕಾರಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್ ರವರ ನೇತ್ರತ್ವದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ‌.

Also Read  ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!

error: Content is protected !!
Scroll to Top