ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ‘ಜೀರೋ ಟ್ರಾಫಿಕ್’ ನಲ್ಲಿ ಬೆಂಗಳೂರಿಗೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.18. ಆಗಷ್ಟೇ ಜನಿಸಿದ ಮಗುವಿಗೆ ಹೃದಯ ಸಮಸ್ಯೆ ಇರುವುದನ್ನು ಗಮನಿಸಿ ತಕ್ಷಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ.

ಅಶ್ವಿನಿ ಎಂಬುವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆದರೆ ಜನಿಸಿದ ಮಗುವಿನಲ್ಲಿ ಹೃದಯ ಸಮಸ್ಯೆ ಇರುವುದನ್ನು ವೈದ್ಯರು ಗಮನಿಸಿದ್ದರು. ಕೂಡಲೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದು, ತಕ್ಷಣದ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾರಣ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದರು.

Also Read  ಏ.8ರ ನಂತರ BJP ಪಟ್ಟಿ ಬಿಡುಗಡೆ ➤ ಸಿಎಂ ಬೊಮ್ಮಾಯಿ

 

error: Content is protected !!
Scroll to Top