(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.17. ಬೆಂಕಿ ಮತ್ತು ಸುರಕ್ಷತೆ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅರ್ಹತೆ ಗಳಿಸುವುದಕ್ಕೆ ಸಂಬಂಧಿಸಿದಂತೆ ಹತ್ತನೇ ತರಗತಿ ಅಥವಾ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಫೈರ್ ಆ್ಯಂಡ್ ಸೇಫ್ಟಿ ಮತ್ತು ಆತಿಥ್ಯ ಕ್ಷೇತ್ರದಲ್ಲಿ ದೇಶ- ವಿದೇಶದಲ್ಲಿ ಬಹಳಷ್ಟು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದನ್ನು ಗಮನಿಸಿ ಮಂಗಳೂರಿನ ಪ್ರತಿಷ್ಠಿತ IBVE ಸಂಸ್ಥೆಯು ಇದಕ್ಕೆ ಸಂಬಂಧಿಸಿದಂತೆ ಸೇಫ್ಟಿ ಆಫೀಸರ್, ಹೆಚ್.ಎಸ್.ಇ ಅಧಿಕಾರಿ, ಸೇಫ್ಟಿ ಇಂಜೀನಿಯರ್ ಹಾಗೂ ಹೋಟೆಲ್ ಎಂಡ್ ಕ್ಯಾಟರಿಂಗ್ ಮ್ಯಾನೇಜ್‌ಮೆಂಟ್, ಡಿಪ್ಲೊಮಾ ಇನ್ ಮರೈನ್ ಹೋಸ್ಪಿಟಾಲಿಟಿ ಇತ್ಯಾದಿ ಕೋರ್ಸ್ ಗಳನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ವೃತ್ತಿ ಪರವಾಗಿ ಬೆಳೆಯಲು ಅನುಕೂಲವಾಗುವಂತೆ ಕೋರ್ಸ್ ರೂಪಿಸಲಾಗಿದ್ದು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಉದ್ಯೋಗ ಪಡೆಯುವುದಕ್ಕೆ ಪೂರಕ ಸಹಾಯವನ್ನು ಸಂಸ್ಥೆ ರೂಪಿಸುವುದರೊಂದಿಗೆ ವಿದೇಶದಲ್ಲೂ ಇಂಟರ್ನೆಶಿಪ್ ಒದಗಿಸಲಾಗುತ್ತದೆ. ಭಾಷಾ ಸಂವಹನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ತರಬೇತಿಗೆ ಸಂಸ್ಥೆ ಹೆಚ್ಚು ಒತ್ತು ನೀಡುತ್ತದೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳಿಗಾಗಿ 0824-4288177, 9900834634 ಗೆ ಸಂಪರ್ಕಿಸುವಂತೆ ಕೋರಲಾಗಿದೆ