ಕಡಬ: ನಿದ್ದೆಯ ಮಂಪರಿನಲ್ಲಿ ವಾಣಿಜ್ಯ ಕಟ್ಟಡಕ್ಕೆ ಢಿಕ್ಕಿ ಹೊಡೆದ ಕಾರು ► ಮೂವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಡಿ.27. ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಬ್ರೆಝಾ ಕಾರೊಂದು ವಾಣಿಜ್ಯ ಸಂಕೀರ್ಣವೊಂದಕ್ಕೆ ಢಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಕಡಬದಲ್ಲಿ ನಡೆದಿದೆ.

ಗಾಯಾಳುಗಳನ್ನು ಸುಳ್ಯ ತಾಲೂಕಿನ ಕರಿಕ್ಕಳ ಮೂಲೂರು ಫಾರ್ಮ್ ನಿವಾಸಿಗಳಾದ ಶ್ರೀಶ(23), ಪತ್ನಿ ಸಂಧ್ಯಾ(20) ಹಾಗೂ ಸತ್ಯಾವತಿ(50) ಎಂದು ಗುರುತಿಸಲಾಗಿದೆ. ಇವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಬದ ಮುಖ್ಯಪೇಟೆಯ ಅನುಗ್ರಹ ಸಭಾಭವನದ ಸಮೀಪದಲ್ಲಿರುವ ವಾಣಿಜ್ಯ ಕಟ್ಟಡಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ನವ ವಿವಾಹಿತರಾಗಿದ್ದ ಶ್ರೀಶಾ ಉಪ್ಪಿನಂಗಡಿ ಕಡೆಯಿಂದ ಕಡಬ ಮಾರ್ಗವಾಗಿ ಪಂಜಕ್ಕೆ ತೆರಳುವವರಿದ್ದರು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ

error: Content is protected !!
Scroll to Top