ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಲಾರಿ !       ➤  ಅದೃಷ್ಟವಶಾತ್ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕಿನ ಆಲಂಕಾರು ಶರವೂರು ದೇವಾಲಯದ ಬಳಿ ಮೊಟ್ಟೆ ಸಾಗಾಟ ಲಾರಿಯೊಂದು ಚಾಲನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಘಟನೆ ಗುರುವಾರದಂದು ಸಂಭವಿಸಿದೆ.

ಚರಂಡಿಗೆ ಉರುಳಿ ಬಿದ್ಬ ಪರಿಣಾಮ ಲಾರಿಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನಿಂದ ನೆಟ್ಟಣಕ್ಕೆ ಮೊಟ್ಟೆ ತಲುಪಿಸಿ ಉಳಿದ ಮೊಟ್ಟೆಗಳನ್ನು ಪುತ್ತೂರಿಗೆ ಕೊಂಡೊಯ್ಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

Scroll to Top