(ನ್ಯೂಸ್ ಕಡಬ) newskadaba.com ಕಡಬ, ಡಿ.27. ಕಡವೆಯೊಂದು ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ಬೈಕ್ ಧರೆಗೆ ಢಿಕ್ಕಿ ಹೊಡೆದುದರಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಬುಧವಾರದಂದು ಮುಂಜಾನೆ ನಡೆದಿದೆ.
ಮೃತರನ್ನು ಕೊಂಬಾರು ನಿವಾಸಿ ವಿಶ್ವನಾಥ ಪೂಜಾರಿ ಎಂಬವರ ಪತ್ನಿ ಸಾವಿತ್ರಿ ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯೊಂದಿಗೆ ಬೈಕಿನಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಹಠಾತ್ತನೆ ರಸ್ತೆಗೆ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್ ಧರೆಗೆ ಹೊಡೆದಿದೆ. ಇದರಿಂದಾಗಿ ನೆಲಕ್ಕೆಸೆಯಲ್ಪಟ್ಟ ಸಾವಿತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.