ಲಂಚ ಸ್ವೀಕಾರ; ಲೋಕಾ ಬಲೆಗೆ ಬಿದ್ದ ಜಿಪಂ AEE…!

(ನ್ಯೂಸ್ ಕಡಬ) newskadaba.comಹಾವೇರಿ,ಫೆ.15.   ಹಾವೇರಿಯಲ್ಲಿ ಸವಣೂರು ಉಪವಿಭಾಗದ AEE ನಿಂಬಣ್ಣ ಹೊಸಮನಿ ಲೋಕಾಯುಕ್ತ  ಬಲೆಗೆ ಬಿದ್ದಿದ್ದು, AEE ನಿಂಬಣ್ಣ ಹೊಸಮನಿ  ಲಚ್ಚಪ್ಪ ದುರ್ಗಪ್ಪ ಕನವಳ್ಳಿಯಿಂದ 40,000 ಹಣಕ್ಕೆ ಬೇಡಿಕೆ ಇಟ್ಟಿದ್ದನು, 30,000 ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆದಿದೆ ಎಂದು ವರದಿಯಾಗಿದೆ.

RDPR ಉಪವಿಭಾಗ ವ್ಯಾಪ್ತಿಯಲ್ಲಿ ಕಾಮಗಾರಿ ಬಿಲ್​ ರಿಲೀಸ್​ಗೆ ಲಂಚ ಸ್ವೀಕರಿಸಿದ್ದನು. ಕಾಂಟ್ರಾಕ್ಟರ್​​​​ ಲಚ್ಚಪ್ಪ ಹಣ ರಿಲೀಸ್ ಮಾಡುವಂತೆ ಕೋರಿದ್ದನು. ಲಚ್ಚಪ್ಪ ಕನವಳ್ಳಿ ನೀಡಿದ ದೂರಿನ ಆಧಾರದ ಮೇಲೆ ರೇಡ್​ ನಡೆಸಲಾಗಿದ್ದು, ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್​​​ ನೇತೃತ್ವದಲ್ಲಿ ನಡೆದಿದೆ.  ಲೋಕಾಯುಕ್ತ AEE ಕಚೇರಿ, ಮನೆಯಲ್ಲಿ ಪರಿಶೀಲನೆ ಮಾಡಿದೆ.

Also Read  ಮನೆ ಬಿಟ್ಟು ತೆರಳಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 

 

error: Content is protected !!
Scroll to Top