(ನ್ಯೂಸ್ ಕಡಬ) newskadaba.comಬೆಂಗಳೂರು,ಫೆ.15. ನಟ ರಿಷಬ್ ಶೆಟ್ಟಿ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ರಿಷಬ್ ಶೆಟ್ಟಿ ಭಾಜನರಾಗಿದ್ದಾರೆ.
ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಪ್ರಶಸ್ತಿ ಲಭ್ಯವಾಗಿದೆ. ಮುಂಬೈನಲ್ಲಿ ಫೆ 20ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ. ಕಾಂತಾರ ಮೂಲಕ ವಿಶ್ವದ ಮನ್ನಣೆ ಪಡೆದ ರಿಷಬ್ ಶೆಟ್ಟಿ ತಾಜ್ ಲ್ಯಾಂಡ್ ಎಂಡ್ ಹೋಟೆಲ್ ನಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಿದೆ.