ಹಾಸನದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧ ➤  ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.!

(ನ್ಯೂಸ್ ಕಡಬ)newskadaba.com  ಹಾಸನ, ಫೆ.15. ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಹೆಚ್.ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಯೋಧ. ಈತ ರೈತ ಹರೀಶ್ ಅವರ ದ್ವಿತಿಯ ಪುತ್ರರಾಗಿದ್ದಾರೆ.

ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ತಮ್ಮ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಪ್ರೀತಿಯಿಂದ ಕಾಲ ಕಳೆದಿದ್ದರು.

10 ಗಂಟೆ ಸಮಯವಾದರೂ ಯೋಗೇಶ್ ಮಲಗಿದ್ದ ರೂಂ ಬಾಗಿಲು ತೆರೆದಿರಲಿಲ್ಲ. ಈ ವೇಳೆ ಮನೆಯವರು ಎಷ್ಟು ಕೂಗಿದ್ರೂ ಬಾಗಿಲು ತೆರೆಯದ ಕಾರಣ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ. ಕೂಡಲೇ ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ.

 

Scroll to Top