ಹಿರಿಯ ಪತ್ರಕರ್ತ ಮಿತ್ತೂರು ಹಾಜಿ ಹಮೀದ್ ಕಂದಕ್ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.15. ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕರಾದ ಹಾಜಿ ಹಮೀದ್ ಕಂದಕ್ ರವರು ಹೃದಯಾಘಾತದಿಂದ ನಿಧನರಾದ ವಾರ್ತೆಯು ಕೇಳಿ ಅತೀವ ನೋವನ್ನು ಉಂಟುಮಾಡಿದೆ. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.

ಹಾಜಿ ಹಮೀದ್ ಕಂದಕ್ ರವರು ಮಿತ್ತೂರು ಸಿರಾಜುಲ್ ಹುದಾ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರು, ಪುತ್ತೂರು ರೇಂಜ್ ನ ಮದ್ರಸ ಮೇನೇಜ್ಮೆಂಟ್ ನ ಪ್ರಧಾನ ಕಾರ್ಯದರ್ಶಿ ಯಾಗಿ ಮತ್ತು ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕರಾಗಿ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ್ದರು,ಇವರ ಅಗಲುವಿಕೆಯು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಪಾರತ್ರಿಕ ಲೋಕವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Also Read  ಭಾರತಕ್ಕೆ ಕೊರೋನಾ ಕಂಟಕ ➤ ಒಂದೇ ದಿನ 6977 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

 

 

error: Content is protected !!
Scroll to Top