ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಕಾರು

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಫೆ.13. ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.

ಸೊರಬ ತಾಲೂಕಿನ ಉಳವಿಯ ವಿಜಯ್ ಸಾಗರದಲ್ಲಿ ನಡೆಯುತ್ತಿರುವ ಮಾರಿ ಜಾತ್ರೆಗೆ ತಮ್ಮ ಕಾರಿನಲ್ಲಿ ಹೊರಟಿದ್ದು, ಈ ವೇಳೆ ಸಾಗರದ ಎಲ್‌ಐಸಿ ಕಚೇರಿ ಮುಂಭಾಗ ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಹೀಗಾಗಿ ತಕ್ಷಣವೇ ಅವರು ಕಾರಿನಿಂದ ಕೆಳಗೆ ಇಳಿದಿದ್ದು, ಬಳಿಕ ಕಾರಿನ ಎಂಜಿನ್, ಬ್ಯಾಟರಿ ಹಾಗೂ ಮುಂಭಾಗ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣಕ್ಕೆ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎಂಟನೇ ಬಲಿ..!

 

error: Content is protected !!
Scroll to Top