ತಂಬಾಕು ಉತ್ಪನ್ನಗಳ ತೆರಿಗೆ ಇನ್ನಷ್ಟು ಹೆಚ್ಚಿಸಬೇಕು ➤ ಕೇಂದ್ರಕ್ಕೆ ಆರ್ಥಿಕ ತಜ್ಞರು, ಪರಿಣತರ ಸಲಹೆ

(ನ್ಯೂಸ್ ಕಡಬ) newskadaba.com. ಹೊಸದಿಲ್ಲಿ. ಫೆ.13. ಕೇಂದ್ರ ಸರಕಾರವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದು ಸ್ವಾಗತಾರ್ಹ. ಇನ್ನೂ ಸಾಕಷ್ಟು ಪ್ರಮಾಣದ ತೆರಿಗೆ ಹೆಚ್ಚಳ ಮಾಡುವ ಮೂಲಕ ತಂಬಾಕು ಮುಕ್ತ ದೇಶ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆರ್ಥಿಕ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

“ಸಿಗರೇಟ್‌ ಮೇಲಿನ ಶೇ. 16ರಷ್ಟು ತೆರಿಗೆ ಹೆಚ್ಚಳವು ಅತ್ಯಂತ ಸೂಕ್ತವಾಗಿದೆ. ಆದರೆ, ‘ಶಾಪಗ್ರಸ್ತ’ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಂಬಾಕು ಉತ್ಪನ್ನ ಕೊಳ್ಳಲು ಸಾಧ್ಯವಾಗದ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಆರೋಗ್ಯವಂತ ದೇಶ ನಿರ್ಮಿಸಬೇಕಾಗಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಸಿಗರೇಟಿನ ಮೇಲೆ ರಾಷ್ಟ್ರೀಯ ಪ್ರಕೃತಿ ವಿಕೋಪ ಸುಂಕವಾಗಿ ಶೇ. 16ರಷ್ಟು ತೆರಿಗೆ ವಿಧಿಸಿರುವುದು ‘ಶಾಪಗ್ರಸ್ತ’ ಉತ್ಪನ್ನಗಳ ಮಾರಾಟ ನಿಗ್ರಹಿಸಲು ತೆಗೆದುಕೊಂಡಿರುವ ಮಹತ್ವದ ನಿರ್ಧಾರ ವಾಗಿದೆ. ಪ್ರತಿ ವರ್ಷ ಸಿಗರೇಟಿನಿಂದ ದೇಶದಲ್ಲಿ 13 ಲಕ್ಷ ಜನರು ಬಲಿಯಾಗುತ್ತಿದ್ದಾರೆ, ಎಂದು ಬಿಜೆಪಿ ವಕ್ತಾರ ಹಾಗೂ ಆರ್ಥಿಕ ತಜ್ಞ ಗೋಪಾಲ ಕೃಷ್ಣ ಅಗರವಾಲ್‌ ಹೇಳಿದ್ದಾರೆ.

error: Content is protected !!

Join the Group

Join WhatsApp Group