(ನ್ಯೂಸ್ ಕಡಬ) newskadaba.com ಬ್ರಿಸಿಲಿಯ, ಫೆ.13. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಬ್ರೆಜಿಲ್‌ನ ರಿಯೋ ಡಿ ಜನೈರೊದ ಮೇಲಿರುವ ವಿಶ್ವದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಬ್ರೆಜಿಲ್ ಕರಾವಳಿಗೆ ಫ್ಲ್ಯಾಶ್ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.
100 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ. ಆದರೆ ಇದರಿಂದ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ. ಈ ದೃಶ್ಯವನ್ನು ಫರ್ನಾಂಡೋ ಬ್ರಾಗಾ ಎಂಬುವವರು ಸೆರೆಹಿಡಿದಿದ್ದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ‘ಡಿವೈನ್ ಲೈಟಿಂಗ್ (ದೈವಿಕ ಬೆಳಕು) ಎಂದು ಬರೆದುಕೊಂಡಿದ್ದಾರೆ.