ಮೆಟ್ಟಿಲು ಬಳಸದೆ 2 ಗಂಟೆಗಳಲ್ಲಿ ಜಮಲಾಬಾದ್ ಪರ್ವತ ಏರಿದ ಕೋತಿರಾಜ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.13. ಸಮುದ್ರ ಮಟ್ಟದಿಂದ 1700 ಅಡಿ ಎತ್ತರವಿರುವ ಜಮಲಾಬಾದ್ ಪರ್ವತವನ್ನು ಮೆಟ್ಟಿಲುಗಳನ್ನು ಬಳಸದೆ ಕೇವಲ ಎರಡು ಗಂಟೆಗಳಲ್ಲಿ ಏರುವ ಮೂಲಕ ಚಿತ್ರದುರ್ಗದ ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್ ಸಾಹಸ ಮೆರೆದಿದ್ದಾರೆ.

2800 ಮೆಟ್ಟಿಲುಗಳಿರುವ ಜಮಲಾಬಾದ್ ಪರ್ವತ (ಗಡಾಯಿಕಲ್ಲು) ವನ್ನು ಕೇವಲ ಕೈಗಳ ಸಹಾಯದಿಂದ ಹತ್ತಿದ ಜ್ಯೋತಿರಾಜ್, ಮಾಮೂಲು ಮೆಟ್ಟಿಲಿನ ಮೂಲಕ ಕೆಳಗಿಳಿದು ಬಂದರು. ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದ ಅವರು, ಪರ್ವತ ಹತ್ತುವ ನಡುವೆ ನಾಲ್ಕು ಕಡೆ ಕಲ್ಲಿನ ಪೊಟರೆ ಹಾಗೂ ಮರದ ಬದಿಗಳಲ್ಲಿ ಅಲ್ಪಕಾಲ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಕುದುರೆಮುಖ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಸ್ವಾತಿ, ಅರಣ್ಯ ರಕ್ಷಕ ಕಿರಣ್ ಪಾಟೀಲ್ ಸೇರಿದಂತೆ ನೂರಾರು ಮಂದಿ ಸಾಕ್ಷಿಗಳಾದರು.

Also Read  ನಿರುದ್ಯೋಗ ಸಮಸ್ಯೆಯೇ...? ನಿಮಗಾಗಿ ಕಾಯುತ್ತಿವೆ ಸಾವಿರಾರು ಉದ್ಯೋಗಗಳು ► ಫೆ.17 ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ 'ದಿಶಾ ಕೆರಿಯರ್ ಫೆಸ್ಟ್'

 

error: Content is protected !!
Scroll to Top