(ನ್ಯೂಸ್ ಕಡಬ) newskadaba.com ಭೋಪಾಲ್, ಫೆ.12. ಆಂಬುಲೆನ್ಸ್ ಸಿಗದೇ ಶವವನ್ನು ಮಗುವಿನ ಶವವನ್ನು ಅಪ್ಪ ಹೆಂಡತಿ ಶವವನ್ನುಗಂಡ ಹೊತ್ತುಕೊಂಡೆ ಹೋದಂತಹ ಹಲವು ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಹಾಗೆಯೇ ಇಲ್ಲೊಂದು ಕಡೆ ಆಂಬುಲೆನ್ಸ್ ಸಿಗದ ಕಾರಣಕ್ಕೆ 7 ವರ್ಷದ ಪುಟ್ಟ ಬಾಲಕನೋರ್ವ ಅಸ್ವಸ್ಥಗೊಂಡಿರುವ ಅಪ್ಪನನ್ನು ತಳ್ಳುಗಾಡಿಯಲ್ಲಿ ಮಲಗಿಸಿ ತಳ್ಳಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬಲಿಯಾರಿಯಲ್ಲಿ ಈ ಆಘಾತಕಾರಿ ಸಂಭಂವಿಸಿದೆ. ಪುಟ್ಟ ಬಾಲಕ ತಳ್ಳುಗಾಡಿಯಲ್ಲಿ ಅಪ್ಪನನ್ನು ಮಲಗಿಸಿಕೊಂಡು ಅಮ್ಮನೊಂದಿಗೆ ಗಾಡಿಯನ್ನು ತಳ್ಳಿಕೊಂಡು ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿ ತೀವ್ರ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಬಾಲಕನ ತಾಯಿ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾಳೆ. ಆದರೆ 20 ನಿಮಿಷ ಕಾದರೂ ಆಂಬುಲೆನ್ಸ್ ಬರುವುದು ಕಾಣಿಸಿಲ್ಲ. ಇದರಿಂದ ಇನ್ನು ಕಾದರೆ ಪರಿಸ್ಥಿತಿ ಹದಗೆಟ್ಟಂತೆ ಎಂದು ಯೋಚಿಸಿದ ಪತ್ನಿ ಹಾಗೂ ಮಗ, ವ್ಯಕ್ತಿಯನ್ನು ತಳ್ಳುಗಾಡಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.