8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.12. ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದ ದ್ವಿಪತ್ನಿತ್ವ ಪ್ರಕರಣದಲ್ಲಿ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪುತ್ತೂರಿನ ದರ್ಬೆ ನಿವಾಸಿ ಅಬ್ದುಲ್ ಹಮೀದ್ (50) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಅಬ್ದುಲ್ ಹಮೀದ್ ಅವರ ಮೊದಲ ಪತ್ನಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಬಳಿಕ ಅಬ್ದುಲ್ 2014ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ ನಡೆಸಿದ್ದರು.

ಅಬ್ದುಲ್‌ ಮೇಲೆ ನ್ಯಾಯಾಲಯ ವಾರೆಂಟ್‌ ಜಾರಿ ಮಾಡಿದ್ದು, ಅಬ್ದುಲ್ ಪುತ್ತೂರಿನಲ್ಲಿ ಇರುವ ಬಗ್ಗೆ ಮಂಜೇಶ್ವರ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ತಲೆಮರೆಸಿಕೊಂಡಿದ್ದ ಅಬ್ದುಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Also Read  ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ

 

 

error: Content is protected !!
Scroll to Top