ನಾಳೆ(ಡಿ.26) ಕಡಬದಲ್ಲಿ ಸಂಯುಕ್ತ ಕ್ರಿಸ್ಮಸ್ ಆಚರಣೆ ► ಕ್ರಿಸ್ಮಸ್ ಸಂದೇಶ ರ್ಯಾಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.25. ಪರಿಸರದ ಕ್ರೈಸ್ತ ಬಾಂಧವರು ಒಟ್ಟುಗೂಡಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಂಯುಕ್ತ ಕ್ರಿಸ್ಮಸ್ ಆಚರಣೆಯು ಡಿಸೆಂಬರ್ 26ನೇ ಮಂಗಳವಾರದಂದು ಕಡಬದಲ್ಲಿ ನಡೆಯಲಿದೆ.

ಸಂಜೆ 5.30 ಕ್ಕೆ ಕಡಬದ ಆರೋಗ್ಯ ಮಾತಾ ಶಿಲುಬೆ ಗೋಪುರದ ಬಳಿಯಿಂದ ವಿಜೃಂಭಣೆಯ ಕ್ರಿಸ್ಮಸ್ ಸಂದೇಶ ರ್ಯಾಲಿ ಆರಂಭಗೊಂಡು, ಕಡಬ ಪೇಟೆಯ ಮೂಲಕ ಸಂಚರಿಸಿ ಸಂಜೆ 06.30 ಗಂಟೆಗೆ ಕಡಬ ಸೈಂಟ್ ಜೋಕಿಮ್ಸ್ ದೇವಾಲಯದ ವಠಾರದಲ್ಲಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರೆ| ಫಾ| ರೊನಾಲ್ಡ್ ಲೋಬೋ ಸ್ವಾಗತಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ಹಾಗೂ ಅತಿಥಿಯಾಗಿ ಕಡಬ ತಹಶೀಲ್ದಾರರಾದ ಜಾನ್ ಪ್ರಕಾಶ್ ಭಾಗವಹಿಸಲಿದ್ದಾರೆ. ರೆ| ಫಾ| ಪೀಟರ್ ಜೋನ್ OIC ಅಧ್ಯಕ್ಷತೆ ವಹಿಸಲಿದ್ದು, ಜೋಯಲ್ ಎಂ.ಜೆ. ಧನ್ಯವಾದ ಸಮರ್ಪಿಸಲಿದ್ದಾರೆ‌. ಅತಿಥಿಗಳಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ಹಾಗೂ ಜಾನ್ ಪ್ರಕಾಶ್ ರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 07.00 ಗಂಟೆಯಿಂದ ವಿವಿಧ ಚರ್ಚ್ ಮತ್ತು ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯಲ್ಲಿ ನಿವಿನ್ ಕುರಿಯಾಕೋಸ್ ನಿರ್ದೇಶನದಲ್ಲಿ ಕಡಬ ತಾಲೂಕಿನ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

error: Content is protected !!

Join the Group

Join WhatsApp Group