ಕಡಬ: ಇಲ್ಲಿನ ಸೈಂಟ್ ಜೋಕಿಮ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಬೆರ್ಲಿನ್ ಪುರುಷರ ಮದುವೆ ಹಾಗೂ ಇನ್ನಿತರ ವಸ್ತ್ರಗಳ ಮಳಿಗೆ ನೂತನ ಮಾಲಕತ್ವದೊಂದಿಗೆ ಬುಧವಾರದಂದು ಶುಭಾರಂಭಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರ್ ಇಲ್ಲಿನ ಪಂಡಿತ್ ಶ್ರೀ ಕೇಶವ್ ಜ್ಯೋತಿಷ್ಯರು ಮಾತನಾಡಿ, ಎಲ್ಲರೊಂದಿಗೆ ಬೆರೆಯುವ ಸಂಸ್ಥೆಯ ಮಾಲಕ ಫೈಝಲ್ ಅವರ ಉದ್ಯಮ ಯಶಸ್ವಿಯಾಗಿ ನಡೆಯಲಿ. ಸಂಸ್ಥೆಯ ಸೇವೆಯನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ವಸ್ತ್ರಗಳ ಮಳಿಗೆ ಅತೀ ಅಗತ್ಯವಾಗಿದ್ದು ಇದರ ಪ್ರಯೋಜನ ಎಲ್ಲರೂ ಪಡೆಯುವಂತಾಗಲಿ. ಸಂಸ್ಥೆಯು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು. ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಡೆನ್ನಿಸ್ ಫೆರ್ನಾಂಡಿಸ್, ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಬಹು| ಮಹಮ್ಮದ್ ರಫೀಕ್ ಸಅದಿ, ಟೌನ್ ಜುಮಾ ಮಸೀದಿಯ ಖತೀಬರಾದ ಬಹು| ಅಲ್ ಹಾಜ್ ಇಬ್ರಾಹಿಂ ದಾರಿಮಿ, ಕಡಬ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್ ಕೆ.ಎಂ., ಮಾಜಿ ಸದಸ್ಯ ಆದಂ ಕುಂಡೋಳಿ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಕಡಬ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಶರೀಫ್ ಸಾಹೇಬ್ ಕೇಪು, ಕೆ.ಪಿ.ಸಿ.ಸಿ. ಸಂಯೋಜಕ ಶರೀಫ್ ಎ.ಎಸ್., ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮೊಯಿದಿನ್ ಮದರ್ ಇಂಡಿಯಾ, ರಮ್ಲಾ ಕಳಾರ, ಸುಧೀರ್ ದೇವಾಡಿಗ, ತಾಜುದ್ದೀನ್ ಎಸ್.ಇ.ಎಸ್. ಉದ್ಯಮಿ ಕಿಶನ್ ಕುಮಾರ್ ರೈ, ಯೂನುಸ್ ಝೂಬಿ ಗೋಲ್ಡ್, ತೋಮಸ್ ಇಡೆಯಾಳ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಫೈಝಲ್ ಎಸ್.ಇ.ಎಸ್. ಅವರು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು. ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.