ಕಾಲಿಲ್ಲದಿದ್ದರೂ ಕನಸು ಕೈ ಹಿಡಿತು  ➤ ತಿಂಗಳಿಗೆ 1 ಲಕ್ಷ ಆದಾಯಗಳಿಸ್ತಿರೋ ರೈತ 

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಫೆ.10. ಉತ್ತರಪ್ರದೇಶದ  ಮಿರ್ಜಾಪುರ ಜಿಲ್ಲೆಯ ವಿಶೇಷ ಚೇತನ ಯುವಕನೊಬ್ಬ ಅಣಬೆ ಬೇಸಾಯ  ಮಾಡುವ ಮೂಲಕ ತನ್ನ ಅದೃಷ್ಟವನ್ನು ಬದಲಾಯಿಸಿಕೊಂಡಿದ್ದಾನೆ.  ಧೈರ್ಯ ಮತ್ತು ನಂಬಿಕೆಯ ಸಹಾಯದಿಂದ ತನ್ನ ದೈಹಿಕ ದೌರ್ಬಲ್ಯವನ್ನು ತನ್ನ ಕುಟುಂಬವನ್ನು ಪೋಷಿಸಲು ಯಶಸ್ಸಾಗಿ ಪರಿವರ್ತಿಸಿದ್ದಾನೆ. ಮಿರ್ಜಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಭಟೋಲಿ ಗ್ರಾಮದ ನಿವಾಸಿ ಬಸಂತ್ ಲಾಲ್ ಪೊಲಿಯೋ ಸಮಸ್ಯೆಯಿಂದ ತನ್ನ ಎರಡೂ ಕಾಲುಗಳ ಸ್ವಾಧಿನ ಕಳೆದುಕೊಂಡಿದ್ದರು.

 ಬಸಂತ್​ ಜಿಡಿ ಬಿನಾನಿ ಕಾಲೇಜಿನಲ್ಲಿ ಬಿಎ ಮಾಡಿದರು,  ಅದರ ನಂತರ ಅವರು ಬಥುವಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ಮಾಡಿದರು. ಇದಾದ ನಂತರ ಹಲವೆಡೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ರಾಂಚಿಗೆ ಹೋಗಬೇಕಾಗಿ ಬಂದಿದ್ದು, ಅಲ್ಲಿ ಅಣಬೆ ಕೃಷಿ ಮಾಡುತ್ತಿರುವವರನ್ನು ಕಂಡರು. ಕೃಷಿಕರನ್ನು ಮಾತನಾಡಿಸಿದಾಗ ಹೆಚ್ಚು ಖರ್ಚಿಲ್ಲ, ಜಮೀನಿನ ಅವಶ್ಯಕತೆ ಇಲ್ಲ ಎಂದು ತಿಳಿದು, ಅಣಬೆ ಕೃಷಿಯತ್ತಲೂ ಒಲವು ತೋರಿದರು

Also Read  ಮದ್ಯ ಸೇವಿಸಿ ವಿಮಾನದಲ್ಲಿ ಗದ್ದಲ ➤  ಇಬ್ಬರು ಅರೆಸ್ಟ್..!

 

 

error: Content is protected !!
Scroll to Top