➤ ಅವಶೇಷಗಳಡಿಯಲ್ಲಿ ಮಗಳ ಮೃತದೇಹ,ಆಕೆಯ ಕೈ ಹಿಡಿದು ಮೌನವಾಗಿ ಕುಳಿತ ಅಪ್ಪ

(ನ್ಯೂಸ್ ಕಡಬ) newskadaba.com. ಟರ್ಕಿ, ಫೆ.10.  ಟರ್ಕಿಯ ಭೂಕಂಪದ  ದೃಶ್ಯಗಳನ್ನು ನೋಡಿದರೆ ಎಂಥಾ ಗಟ್ಟಿ ಮನಸ್ಸು  ಕೂಡಾ ಕರಗುತ್ತದೆ. ತನ್ನ 15ರ ಹರೆಯದ ಮಗಳು ಭೂಕಂಪದಲ್ಲಿ ಸಾವಿಗೀಡಾಗಿದ್ದಾಳೆ. ಅವಶೇಷಗಳಡಿಯಲ್ಲಿ ಆಕೆಯ ದೇಹ ಸಿಕ್ಕಿಬಿದ್ದಿದ್ದು, ಆಕೆಯ ಕೈ ಮಾತ್ರ ಹೊರಗೆ ಕಾಣತ್ತದೆ.

ಆ ಬಾಲಕಿಯ ಅಪ್ಪ ಆಕೆಯ ಕೈ ಹಿಡಿದು ಕೂತಿದ್ದಾನೆ. ಚಿತ್ರದಲ್ಲಿರುವ ಆ ವ್ಯಕ್ತಿ ಹೆಸರು ಮೆಸುಟ್ ಹ್ಯಾನ್ಸರ್. ಒಡೆದ ಇಟ್ಟಿಗೆಗಳ ರಾಶಿಯ ಮೇಲೆ ಹೆಪ್ಪುಗಟ್ಟುವ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡಿದ್ದಾರೆ. ಅವರ ಮನೆ ನೆಲಸಮವಾಗಿದೆ. ಅವರ ಮಗಳು ಇರ್ಮಾಕ್ ಸತ್ತಿದ್ದಾಳೆ. ಆದರೆ ಅವನು ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀ ಹೋಗ ಬೇಡ ಅನ್ನುವಂತಿದೆ.

Also Read  ನಾಲ್ಕು ಫ್ಯಾಕ್ಟರಿಗೆ ಬೀಗ ಜಡಿಯಲಿರುವ ಪೆಪ್ಸಿಕೊ..!

 

error: Content is protected !!
Scroll to Top