ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣ ➤ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ

  • ನ್ಯೂಸ್ ಕಡಬ)newskadaba.com. ಕಾಪು ಫೆ.10. ಕಳೆದ ಭಾನುವಾರ ಸಂಜೆ ಶರತ್‌ ಶೆಟ್ಟಿ ಅವರನ್ನು ಹತ್ಯೆ ಮಾಡಲಾಗಿತ್ತು. ಪಾಂಗಾಳದ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ಶರತ್ ಮೊಬೈಲ್ ಕರೆ ಮಾಡಿ, ಅಂಗಡಿಯೊಂದರ ಬಳಿಗೆ ಮಾತುಕತೆಗೆ ಕರೆದ ಯುವಕರ ತಂಡ ಬಳಿಕ ಅಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಕೊಲೆಗೈದು
  • ಪರಾರಿಯಾಗಿದ್ದರು ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತತ್‌ಕ್ಷಣದಿಂದಲೇ ಚುರುಕಿನ ತನಿಖೆ ಮುಂದುವರಿಸಿದ್ದರು.

ಹತ್ಯೆಗೆ ಸಂಬಂಧಿಸಿ ಸಂಶಯದ ಮೇರೆಗೆ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರಿಗೆ ಮಹತ್ವದ ವಿಚಾರಗಳು ದೊರಕಿವೆಯಾದರೂ ಅದನ್ನು ಇನ್ನೂ ಧೃಡಪಡಿಸಿಲ್ಲ. ಪ್ರಮುಖ ಆರೋಪಿಗಳ ಬೆನ್ನತ್ತಿರುವ ಪೊಲೀಸರಿಗೆ ಹತ್ಯೆಯ ಹಿಂದೆ ಹೊರಗಿನ ವ್ಯಕ್ತಿಗಳ ಕೈವಾಡ ಇರುವ ಬಗ್ಗೆಯೂ ಸುಳಿವು ಲಭ್ಯವಾಗಿದ್ದು ಆ ಆಯಾಮದಲ್ಲೂ ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಮುಂದಿನ ಒಂದೆರಡು ದಿನಗಳಲ್ಲಿ ಹತ್ಯೆಯ ಹಿಂದಿನ ಸಂಪೂರ್ಣ ಚಿತ್ರಣ ಹೊರ ಬೀಳುವ ಸಾಧ್ಯತೆಗಳಿವೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

error: Content is protected !!
Scroll to Top