ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8. ನವದೆಹಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ ಮನಸ್ಸು ಕರಗಿಸುವಂತಿದೆ.
17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು, ಸುರಕ್ಷಿತವಾಗಿ ಇಬ್ಬರು ಮಕ್ಕಳು ಹೊರಬಂದಿದ್ದಾರೆ. ಸಂಕಟದ ಪರಿಸ್ಥಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.