(ನ್ಯೂಸ್ ಕಡಬ) newskadaba.com ಕಡಬ, ಡಿ.22. ಮದ್ದು ತರಲೆಂದು ತೆರಳಿದ್ದ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಡಿ.13 ರಂದು ನಡೆದಿದ್ದು, ಈ ಬಗ್ಗೆ ಹುಡುಕಾಡಿದ ಮಹಿಳೆಯ ಮನೆಯವರು ತಡವಾಗಿ ಕಡಬ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ಮಹಿಳೆಯನ್ನು ಐತ್ತೂರು ಗ್ರಾಮದ ಓಟೆಕಜೆ ನಿವಾಸಿ ಸ್ವಾಮಿವೇಲು ಎಂಬವರ ಪತ್ನಿ ಜ್ಯೋತಿ ಮಾಲಾರ್(30) ಹಾಗೂ ಮಕ್ಕಳಾದ ವರ್ಷಿಣಿ(9) ನಿದೀಶ್(7) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದಿದ್ದಾಗ ಕಡಬ ಪೊಲೀಸರಿಗೆ ದೂರು ನೀಡಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರನ್ನು ಕಂಡವರು 9606854590 ಅಥವಾ ಕಡಬ ಪೊಲೀಸ್ ಠಾಣೆ 9480805364 ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಪ್ರಕಟಣೆ ತಿಳಿಸಿದೆ.