ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 568 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.06. 7.8 ತೀವ್ರತೆಯ ಭೂಕಂಪವು ಟರ್ಕಿಯನ್ನು ಬೆಚ್ಚಿಬೀಳಿಸಿದ್ದು, ಇದರ ಬೆನ್ನಲ್ಲೇ ಮತ್ತೊಂದು ಪ್ರಬಲ ಭೂಕಂಪವು ಪ್ರದೇಶದ ಹಲವಾರು ಪ್ರಾಂತ್ಯಗಳಲ್ಲಿ ಸಂಭವಿಸಿದೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ ಎಂದು ವರದಿಗಳು ತಿಳಿಸಿದೆ.

ನೂರ್ಡಗಿ ಪಟ್ಟಣದಿಂದ ಸುಮಾರು 26 ಕಿಲೋಮೀಟರ್ (16 ಮೈಲಿ) ದೂರದಲ್ಲಿರುವ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಎರಡು ದೇಶಗಳ ನಡುವಿನ ಗಡಿಯ ಸಮೀಪ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸಾವು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡಗಳಡಿ ಮೃತದೇಹಗಳು ಪತ್ತೆಯಾಗುತ್ತಿದೆ ಎನ್ನಲಾಗಿದೆ.

Also Read  ಅಕ್ರಮ ಮರಳು ಸಾಗಾಟ- ಲಾರಿ ವಶಕ್ಕೆ

error: Content is protected !!
Scroll to Top