ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಯುವಕ

(ನ್ಯೂಸ್ ಕಡಬ)newskadaba.com ಸಿಂಗಪುರ, ಫೆ.05. ಪ್ರೀತಿಸುತ್ತಿದ್ದ ಯುವತಿ ಮದುವೆಯನ್ನು ನಿರಾಕರಿಸಿದ್ದಕ್ಕೆ ಆಕೆ‌‌ ಮೇಲೆ ಬರೊಬ್ಬರಿ 24 ಕೋಟಿ ಪರಿಹಾರ ಕೊಡುವಂತೆ ಕೇಸ್ ಹಾಕಿರುವ ವಿಚಿತ್ರ ಘಟನೆ ಸಿಂಗಪುರದಿಂದ ವರದಿಯಾಗಿದೆ.

ಕೌಶಿಗನ್ ಎಂಬ ವ್ಯಕ್ತಿ ನೋರಾ ತಾನ್ ಎಂಬ ಯುವತಿಯನ್ನು 2016 ರಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಗೆಳೆತನವಾಗಿದೆ. ಗೆಳೆತನ ಪ್ರೀತಿಯಾಗಿ ಬದಲಾಗಿತ್ತು.

ಕೌಶಿಗನ್ ಆಕೆಗೆ ಪ್ರೇಮ ನಿವೇದನೆ ಮಾಡಿಕೊಂಡಾಗ ಅದನ್ನು ನೋರಾ ನಿರಾಕರಿಸಿದ್ದಾಳೆ. ಇದರಿಂದ ಕೊಪಗೊಂಡ ಕೌಶಿಗನ್​ ಆಕೆ ನನ್ನ ಪ್ರೇಮವನ್ನು ನಿರಾಕರಿಸಿದ್ದರಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಇದರಿಂದ ನನ್ನ ಬದುಕು ಜರ್ಜರಿತರವಾಗಿದೆ ಎಂದು ದೂರಿ ಕೋರ್ಟ್​ ಮೊರೆ ಹೋಗಿದ್ದಾರೆ. ಈ ಕುರಿತು ಅರ್ಜಿ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ‌.

Also Read  3 ದಿನದಲ್ಲಿ 40 ಜನರ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ಹಣ ನಾಪತ್ತೆ !       

 

 

error: Content is protected !!
Scroll to Top