ಕಾರ್ಕಳ: ಕಾಡಿನಿಂದ ನಾಡಿಗೆ ಆಗಮಿಸಿದ ಚಿರತೆ ► ಮನೆಯಂಗಳದಲ್ಲಿ ಎಲ್ಲರೆದುರೇ ವಿಲವಿಲನೆ ಒದ್ದಾಡಿ ಸಾವು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ.22. ಕಾಡಿನಿಂದ ನಾಡಿಗೆ ಆಗಮಿಸಿದ ಹೆಣ್ಣು ಚಿರತೆಯೊಂದು ಮನೆಯಂಗಳದಲ್ಲಿ ವಿಲವಿಲನೆ ಒದ್ದಾಡಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಎರ್ಲಪ್ಪಾಡಿ ಎಂಬಲ್ಲಿ ಗುರುವಾರದಂದು ನಡೆದಿದೆ.

ಗುರುವಾರದಂದು ಕಾರ್ಕಳ ತಾಲೂಕಿನ ಎರ್ಲಪ್ಪಾಡಿ ಗ್ರಾಮದ ಕಾಂತರಗೋಡಿಯ ವಿಲಿಯಂ ಎಂಬವರ ಮನೆಯ ಅಂಗಳಕ್ಕೆ ಏಕಾಏಕಿ ಆಗಮಿಸಿದ ದೊಡ್ಡ ಗಾತ್ರದ ಹೆಣ್ಣು ಚಿರತೆಯೊಂದು ಸುತ್ತು ಬಂದವರಂತೆ ಬೀಳುತ್ತಿತ್ತು. ಮತ್ತೆ ಏಳಲು ಪ್ರಯತ್ನ ಮಾಡಿ ಮತ್ತೆ ಮತ್ತೆ ಬೀಳುತ್ತಿತ್ತು. ಸುಮಾರು 10 ರಿಂದ 15 ನಿಮಿಷಗಳ ಕಾಲ ಎಲ್ಲರ ಕಣ್ಣಮುಂದೆಯೇ ಒದ್ದಾಡಿ, ಕೊನೆಗೆ ಸತ್ತುಹೋಗಿದೆ. ಈ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೂಡಲೇ ವಿಲಿಯಂ ಅವರ ಕರೆಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ. ಬಳಿಕ ಅರಣ್ಯ ಇಲಾಖೆಯು ಚಿರತೆಯ ಮೃತದೇಹವನ್ನು ಪರೀಕ್ಷೆ ಮಾಡಿದ್ದು, ಚಿರತೆ ಹೊಟ್ಟೆಯಲ್ಲಿ ಹುಲ್ಲು ಕಂಡುಬಂದಿದೆ. ತೀವ್ರ ಹಸಿವಿನಿಂದ ಚಿರತೆ ಬಳಲಿ ಹಸಿವು ತಾಳಲಾರದೆ ಹುಲ್ಲನ್ನು ತಿಂದಿರಬಹುದು ಅಲ್ಲದೆ ಹಸಿವು ಜೋರಾಗಿ ಸತ್ತಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Also Read  ಎಸ್ಕೆಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ- ಸುಳ್ಯ ವಲಯ ಮಟ್ಟದ ಉದ್ಘಾಟನೆ

error: Content is protected !!
Scroll to Top