‘UPSC’ಯಿಂದ ನೋಟಿಫಿಕೇಶನ್ ರಿಲೀಸ್ ➤ 1105 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.03. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ದೇಶದ ಅತ್ಯುನ್ನತ ಸೇವೆಗಳಿಗೆ ನೇಮಕಾತಿಗಾಗಿ ಪ್ರತಿ ವರ್ಷ ನಾಗರಿಕ ಸೇವೆಗಳ ಪರೀಕ್ಷೆಯನ್ನ ನಡೆಸುತ್ತದೆ. ಈ ವರ್ಷ 1105 ಅಭ್ಯರ್ಥಿಗಳು ನೇಮಕಗೊಳ್ಳಲಿದ್ದಾರೆ. ಇತ್ತೀಚೆಗೆ ನಾಗರಿಕ ಸೇವಾ ಪರೀಕ್ಷೆ 2023 ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ಫೆಬ್ರವರಿ 21 (ಸಂಜೆ 6:00 ರವರೆಗೆ) upsc.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಮೇ 28 ರಂದು ಮೇನ್ಸ್ ಸ್ಕ್ರೀನಿಂಗ್ ಟೆಸ್ಟ್ ಸಿವಿಲ್ ಸರ್ವೀಸಸ್ ಪರೀಕ್ಷೆ ನಡೆಸಲಾಗುವುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಮುಖ್ಯ ಪರೀಕ್ಷೆಯು ಈ ವರ್ಷ ನವೆಂಬರ್ ನಲ್ಲಿ ನಡೆಯುವ ನಿರೀಕ್ಷೆಯಿದೆ.

Also Read  ಉಳ್ಳಾಲ: ಸಮುದ್ರದಲ್ಲಿ ವೃದ್ದೆಯ ಶವ ಪತ್ತೆ

 

 

error: Content is protected !!
Scroll to Top