ಒಂದು ಕೇಸ್​ನಲ್ಲಿ ಅರೆಸ್ಟ್​  ➤ ಬಾಯಿ ಬಿಟ್ಟಿದ್ದು 9 ಮನೆಗಳ್ಳತನ..!

(ನ್ಯೂಸ್ ಕಡಬ)newskadaba.com ಮಂಡ್ಯ, ಫೆ.02. ಕುಖ್ಯಾತ ಮನೆಗಳ್ಳರ ತಂಡವನ್ನು ಬಂಧಿಸುವಲ್ಲಿ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊದಲಿಗೆ ಪೊಲೀಸರು ಆರೋಪಿಗಳನ್ನು ಒಂದು ಪ್ರಕರಣದಲ್ಲಿ ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ತಮ್ಮ ಹಳೆಯ ಪ್ರಕರಣಗಳನ್ನು ಬಾಯಿ ಬಿಟ್ಟಿದ್ದಾರೆ.

ವಿಚಾರಣೆ ವೇಳೆ ಬರೋಬ್ಬರಿ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಮೊದಲಿಗೆ ಒಂಟಿ ಮನೆಗಳನ್ನು ಸರ್ವೇ ಮಾಡುತ್ತಿದ್ದ ಈ ಗ್ಯಾಂಗ್ ಸಂಚು ಹಾಕಿ ಕಳ್ಳತನ ಮಾಡಿತ್ತು. ಮಹಾರಾಷ್ಟ್ರದ ಥಾಣಾ ಮೂಲದ ಗ್ಯಾಂಗ್ ಇದಾಗಿದ್ದು, ಕಳ್ಳತನ ಮಾಡಲು ತಂಡದ ಲೀಡರ್ ರಾಜ್ಯಕ್ಕೆ ವಿಮಾನದಲ್ಲಿ ಬರುತ್ತಿದ್ದನು ಎನ್ನಲಾಗಿದೆ.

Also Read  ಸುಳ್ಯ: ಅಪ್ರಾಪ್ತ ಯುವತಿ ಆತ್ಮಹತ್ಯೆ

error: Content is protected !!
Scroll to Top