ಪುತ್ತೂರು: ಕಂಬಳದಲ್ಲಿ ಚಿತ್ರ ನಟಿ ಸಾನಿಯಾ ಅಯ್ಯರ್ ಗೆ ಮುಜುಗರ…!

(ನ್ಯೂಸ್ ಕಡಬ)newskadaba.com ಪುತ್ತೂರು, ಜ.30. ನಗರದಲ್ಲಿ ನಡೆಯುತ್ತಿರುವ ಕೋಟಿ-ಚೆನ್ನಯ ಕಂಬಳದಲ್ಲಿ ಚಿತ್ರ ನಟಿ ಸಾನಿಯಾ ಅಯ್ಯರ್ ಗೆ ಅಭಿಮಾನಿಯೊಬ್ಬ ಕಿರಿಕ್ ಮಾಡಿರುವ ಘಟನೆ ವರದಿಯಾಗಿದೆ.


ಚಿತ್ರನಟಿ ಸಾನಿಯಾ ಅಯ್ಯರ್ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದು, ವೇದಿಕೆಯಿಂದ ಇಳಿದು ಬರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ಕೆಳುವ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದಿರುವ ಆರೋಪ ಎದುರಾಗಿದೆ, ಇದರಿಂದ ಸಾನಿಯ ಅಯ್ಯರ್ ಮುಜುಗರಕ್ಕೊಳಗಾಗಿದ್ದಾರೆ.


ಅಭಿಮಾನಿ ಸಾನಿಯಾ ಅಯ್ಯರ್ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಹೇಳುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷೀಕೇಶ್ ಸೊನವಣೆ ತಿಳಿಸಿದ್ದಾರೆ.

Also Read  ನವಜಾತ ಶಿಶುವಿನ ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯ 'ಲೇಡಿ ಗೋಶೆನ್' ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲೆ

 

error: Content is protected !!
Scroll to Top