(ನ್ಯೂಸ್ ಕಡಬ)newskadaba.com ನವದೆಹಲಿ, ಜ.28. 15 ವರ್ಷ ತುಂಬಿದ ಕೇಂದ್ರ, ರಾಜ್ಯ ಸರ್ಕಾರಿ ವಾಹನಗಳು ಏಪ್ರಿಲ್ 1 ರಿಂದ ಗುಜರಿ ಸೇರಲಿವೆ. ಪರಿಸರಕ್ಕೆ ಮಾರಕವಾಗಿರುವ ವಾಹನ ಬಳಕೆ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, 15 ವರ್ಷ ಪೂರ್ಣಗೊಂಡ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಾಹನಗಳ ನೋಂದಣಿಯನ್ನು ಏಪ್ರಿಲ್ 1 ರಿಂದ ರದ್ದುಪಡಿಸಲಾಗುವುದು.
ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳು ಗುಜರಿ ಸೇರಲಿವೆ. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರ್ ಕರಡು ಅಧಿಸೂಚನೆ ಹೊರಡಿಸಿದ್ದರು. ಅಂತೆಯೇ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶ, ಮಹಾನಗರ ಪಾಲಿಕೆ, ಸಾರ್ವಜನಿಕ ಸೇವೆಗೆ ಸೇರಿದ ವಾಹನಗಳಿಗೆ ಮೊದಲ ನೋಂದಣಿ ದಿನಾಂಕದಿಂದ 15 ವರ್ಷ ಪೂರ್ಣಗೊಳಿಸಿದ ವಾಹನಗಳನ್ನು ತನ್ನಿಂದ ತಾನೇ ರದ್ದಾಗಲಿವೆ.
ವಾಣಿಜ್ಯ ವಾಹನಗಳಿಗೆ ಮತ್ತು ಖಾಸಗಿ ವಾಹನಗಳಿಗೆ 2024ರ ಜೂನ್ ನಿಂದ ಈ ನಿಯಮ ಅನ್ವಯವಾಗಲಿದೆ ಭದ್ರತಾ ವಾಹನಗಳನ್ನು ಈ ನಿಯಮದಿಂದ ಹೊರಗಿಡಲಾಗಿದ್ದು, 15 ವರ್ಷ ತುಂಬಿದ ಸರ್ಕಾರಿ ವಾಹನಗಳ ನೋಂದಣಿ ಏಪ್ರಿಲ್ 1 ರಿಂದ ರದ್ದಾಗಲಿದೆ ಎಂದು ಹೇಳಲಾಗಿದೆ.