ಅದಾನಿ ಗ್ರೂಪ್‌ನ ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ ವ್ಯಕ್ತಿ !

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಈಗ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

137.4 ಬಿಲಿಯನ್ ಡಾಲರ್‌ (10.97 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿರುವ 60 ವರ್ಷದ ಅದಾನಿ ಅವರು, ಲೂಯಿಸ್ ವಿಟಾನ್ ಕಂಪನಿಯ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನು ಮೀರಿಸಿರುವ ಅದಾನಿ ಇದೀಗ, ಅಮೆರಿಕದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್‌‌ನ ಜೆಫ್ ಬೆಜೋಸ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಒಟ್ಟು 91.9 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಸ್ಥಾನ ಪಡೆದ ಏಷ್ಯಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಅದಾನಿ ಪಾತ್ರರಾಗಿದ್ದಾರೆ.

Also Read  15 ವರ್ಷದ ಬಾಲಕಿಯನ್ನು ಅಪಹರಿಸಿ,ಅತ್ಯಾಚಾರವೆಸಿಗಿದ ಪಾಪಿ.!

 

 

error: Content is protected !!
Scroll to Top