ಕರ್ನಾಟಕದಲ್ಲಿ ವನ್ಯಮೃಗಗಳ ದಾಳಿಗೆ ಮೂವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com   ಚಿಕ್ಕಮಗಳೂರು, ಜ.27. ರಾಜ್ಯದಲ್ಲಿ ವನ್ಯಮೃಗಗಳ ದಾಳಿಗೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ‌ ತೆರಳುವ ವೇಳೆ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿದೆ.

ಇನ್ನು ಮತ್ತೊಂದು ಕಡೆ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.  ಬೈಕಿನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೀಲಿಪ್, ಆಶಾ ಎಂಬುವರೇ ಕಾಡುಕೋಣದ ದಾಳಿಗೊಳಗಾದವರು ಎನ್ನಲಾಗಿದೆ.

Also Read  ಬೈಕ್- 3 ಕಾರುಗಳ ಮಧ್ಯೆ ಸರಣಿ ಅಪಘಾತ: ನಾಲ್ವರಿಗೆ ಗಂಭೀರ ಗಾಯ

 

error: Content is protected !!
Scroll to Top